ಪಾಟಿ ಕಡ್ಡಿ (Slate & Chalk) ನನ್ನ ಮೊದಲ ಪುಸ್ತಕ . ಕೈ ಹಿಡಿದು ತಿದ್ದಿದಳು . ಮತ್ತೊಮ್ಮೆ ನದ ಅದೆಸ್ಟು ಭಾರಿ ಸಹನಯಿಂದ ಹೇಳಿಕೊಟ್ಟಲೋ ಅವಳಿಗೀ ಗೊತ್ತು . ಅಸ್ಟು ದಡ್ದರಾಗಿದ್ದ ನಮ್ಮನ್ನ ಇಂದು ಈ ಮಟ್ಟಕ್ಕೆ ತರುವಲ್ಲಿ ಅವಳ ಸಾಧನೆ ಶ್ರದ್ಧೆಗೆ ನಾನೆಂದಿಗೂ ಚಿರರುಣಿ .
ಅದು ಬಾಲವಾಡಿಯ ಮೊದಲನೆಯ ದಿನ . ನನ್ನನ್ನು ಪಟ್ಯ ಪುಸ್ತಕದೊಂದಿಗೆ ಚಿಕ್ಕ ಚೀಲೊಂದನ್ನ ಬಗಲಿಗೆ ಜೋತು ಬಿಡಲಾಯಿತು. ಇದೆಲ್ಲದರ ಜೊತೆಗೆ ಮಧ್ಯಂತರದಲ್ಲಿ ತಿನ್ನಲ್ಲು ತಿಂಡಿ, ನೀರು ಸೇರಿಕೊಂಡವು. ಮಗನಿಗೆಲ್ಲಿ ಭಾರವಾಗತ್ತೋ ಎಂದು ಅವಳೇ ಅದನ್ನ ತನ್ನ ಕೈಯಲ್ಲಿ ಹಿಡಿದುಕೊಂಡಳು. ಶಾಲೆಯ ಹೊಸ ಸಮವಸ್ತ್ರ ತೊಡಿಸಿ , ತಲೆಯನ್ನು ಬಾಚಿ ಮುಖಕ್ಕೆ ಕೊಂಚ ಪೌಡರ್ಇಂದ ಸಿಂಗರಿಸಿ ಕೈ ಹಿಡಿದು ಹೊರಟಳು. ನನಗಂದು ಹೊಸ ಅನುಭವ . ಮುಂದೆನಾಗೊತ್ತೋ ಅನ್ನುವುದರ ಪರಿವೇ ಇಲ್ಲದೆ ಹೆಜ್ಜೆ ಹಾಕಿದೆ . ದಾರಿಯಲ್ಲಿ ಇದ್ದ ಎಲ್ಲ ಗಿಡ ಮರಗಳನ್ನ , ಗುಬಚ್ಚಿ ತಾಗೆಯಂಬ ಭೇದ ಭಾವವಿಲ್ಲದೆ ಮಾತನಾಡಿಸುತ್ತ ಮುನ್ನಡೆದೆ.
ಅಂತು ಶಾಲೆ ಸಮೀಪಿಸಿತು . ೧೬ ಮೆಟ್ಟಿಲುಗಳು ಒಳಗೆ ಬಾ ಎಂದು ಕೈ ಬೀಸಿ ಕರೆಯಿತು . ಆದರು ಏನೂ ಕೊಂಚ ಅಂಜಿಕೆ . ಅವಳ ಕೈ ಬಿಡಲಿಲ್ಲ. ಅವಳೂ ಸಹ ಕೈ ಹಿಡಿದೇ ಮುಂದೆ ಹೆಜ್ಜೆ ಹಾಕಿದಳು . ಶಾಲೆಯಲ್ಲಿ ನನ್ನಂತೆ ೧೫ -೨೦ ಚಿಣ್ಣರನ್ನು ಕಂಡು ಮನದಲ್ಲಿ ಕೊಂಚ ಆಶೆಯ ಮೂಡಿತು . ಅವರೊಂದಿಗೆ ಬೆರೆತು ಆಟವಾಡಲು ಮುಂದಾಯಿತು. ಆದರೆ ಅಸ್ತೊತ್ತಿಗೆ ಅಲ್ಲಿ ಇನ್ನು ಒಂದು ಆಶ್ಚರ್ಯ ಕಾಡಿತ್ತು . ಅದು ನಮ್ಮ ಕಮಲ ಟೀಚರ್. ಅವರು ಎಸ್ಟೇ ಪ್ರೀತಿಯಿಂದ ಕಂಡರೂ ನನಗದು ಹೊಸತು . ಹಾಗಾಗಿ ಮನದಲ್ಲಿ ಭಯ ಮಾಡಿತ್ತು. ಚಿಕ್ಕ ಮನೆ ಅಸ್ಟೆ ಅಲ್ಲ … ದೊಡ್ಡ ಬಂಗಲೆಯೀ ನಿರ್ಮಾಣವಾಗಿತ್ತು. ಮುಂದೇನು ಆಗುವುದೋ ಯಂಬ ಪ್ರಶ್ನೆಗಳು ಮಳೆಯಾಗಿ ಸುರಿಯಲಾರಮಬಿಸಿತು. ಬಿಟ್ಟ ಕಣ್ಣುಗಳೆರಡು ಮುಚ್ಚಲು ಮರೆತವು . ಇದಾವ ಲೋಕಕ್ಕೆ ಬಂದುಬಿಟ್ಟೆನೋ ಎಂಬಂತೆ ಭಾಸವಾಯಿತು. ಅವಳು ಕೈ ಸಡಿಲಿಸಿದಳು. ನನಗೆ ಮೈಯಲ್ಲಿ ನಡುಕ ಹೆಚ್ಚಾಯಿತು. ಜಾರಿದ ಚಡ್ಡಿಯನ್ನು ಮೇಲೇರಿಸಿ ಹಿಂದೆಲ್ಲ ನೋಡಿದೆ . ತಿರುಗಿ ಮುಂದೆ ನೋಡಿದಾಗ ಅವಳು ಕೈ ಬೀಸಿ ಟಾಟ ಎನ್ನುತಿದ್ದಳು. ನನಗದು ಅಚ್ಚಳಿಯದ ದೃಶ್ಯ . ತುಟಿಗಳೆರಡು ಅರ್ಧಚಂದ್ರಾಕೃತಿ ಆಯಿತು. ಕನ್ನುಗೆರಡು ಮಂಜಾಯಿತು. ಗಂಗೆ ತುಂಗೆ ಕೈ ಜೋಡಿಸಿಸವು . ಧಾರೆಗಳಗಿ ಧೂಮಕೇತುವಿನಂತೆ ನೆಲವನ್ನು ಅಪ್ಪಳಿಸಿದವು.ಕರು ಹಸುವನ್ನು ಅಪ್ಪಿದಂತೆ ಹೋಗಿ ಅಪ್ಪಿದೆ. ಅವಳು ಕಣ್ಣು ವರೆಸಿ ಚಾಕಲೇಟ್ ಒಂದನ್ನು ಬಾಯಲ್ಲಿ ಇರಿಸಿದಳು.ಸಂತೈಸಿದಳು.ಪಾಟಿ ಚೀಲವನ್ನ ನಾನಗೊಪ್ಪಿಸಿ ನಿಧಾನವಾಗಿ ಹೊರ ನಡೆದಳು . ನಾನು ಓಡಿ ಬಾಗಿಲ ಬಳಿ ನಿಂತು ಅವಳನ್ನೇ ನೂದುತಲಿದ್ದೆ.ನನ್ನ ಮನದಾಳದ ನೋವು ಅವಳ ಕಣ್ಣಲ್ಲಿ ಸ್ವಚ್ಚಂದವಾಗಿ ಕಾಣುತಲಿತ್ತು ಆದರು ಸಹ ತನಗೆಸ್ಟೆ ಕಷ್ಟವಾದರೂ ಅದನ್ನು ಒಳಗೆ ಅದುಮಿ ಮುಗುಳ್ನಗೆಯನ್ನು ಹೊರಸೂಸಿ ನನಗೆ ಹುರಿದುಂಬಿದಳು. ಮತ್ತೆ ಶಾಲೆಯ ಅವದಿಯ ಬಳಿಕ ಮತ್ತೆ ಸಿಗುವೆ ಎಂದು ಇಂದು ಇಂದು ಇಂದು ಇಂದು ಹೊರ ನಡೆದಳು.
ಜ ಅವಳು ಇಂದು ಇವತ್ತು ಬಿಡದಿದ್ದರೆ…. ಪಾಟಿ ಕಡ್ಡಿ ಹಿಡಿದ ಈ ಕೈಗಳು ಇಂದು ಕಂಪ್ಯೂಟರ್ ಇಂದು ಟೈಪ್ ಮಾಡುತ್ತಿರಲಿಲ್ಲ . ಅದು ಮತ್ತಾರು ಅಲ್ಲ . ನನ್ನ ಪ್ರೀತಿಯ ಅಮ್ಮ . ಅವಳಿಗೆ ಈ ಮದರ್'ಸ ಡೇ ಗೆ ನನ್ನ ಒಂದು ಈ ಸವಿನೆನಪು ಅವಿಲಿಗಾಗಿ . ಅಮ್ಮ … ನೀನೆಸ್ಟು ಚೆನ್ನ ನಿನಗೆ ಸಹಸ್ರ ನಮನ …!!!