Welcome to My World of Words!!!

Pages

Saturday, January 15, 2011

ಸಂಕ್ರಾಂತಿ.. ಒಂದು ಮೆಲುಕು...!!!

ಸಂಕ್ರಾಂತಿ.. ಒಂದು ಮೆಲುಕು...!!!


ಎಲ್ಲರಿಗು ಸಂಕ್ರಾಂತಿ ಹಬ್ಬದ ಹಾರ್ಥಿಕ ಶುಭಾಶಯಗಳು !!!

ಸಂಕ್ರಾಂತಿ ಎಂದ ಕೂಡಲೇ ನೆನಪಿಗೆ ಬರುವುದು ಎಳ್ಳುಬೆಲ್ಲ ... ಮನೆ ಮನೆ ಹೋಗಿ ಹಂಚಿ ತಾವು ಸವಿದು ನಲಿವ ಒಂದು ಸುಂದರ ಹಬ್ಬ...

ಹಮ್... ಎಲ್ಲಾ ಒಂದು ನೆನಪು ಅಸ್ಟೆ ಈಗ.. ಅದೊಂದು ಕಾಲ ಇತ್ತು... ನಾವು ಊರಲ್ಲಿ ಇರೋ ಗೊತ್ತಿರೋ ಗೊತ್ತಿಲ್ದೆ ಇರೋ ಎಲ್ಲರ ಮನೆಗೂ ಹೋಗಿ ಎಳ್ಳು ಬೆಲ್ಲ ಹಂ
ಚಿ ಬರುತಿದ್ದೆವು. ಆದರೆ ಈ ಬಾರಿ ನಾನು ಮನೆಗೆ ಹೋದಾಗ ಕಂಡ ಸಂಗತಿಯೇ ಬೇರೆ. ನಾನೇನೋ ದೊಡ್ಡವನಾದೆ... ಮನೆ ಮನೆಗೆ ಹೋಗಿ ಎಳ್ಳು ಹಂಚುವುದು ಅಸ್ಟೊಂದು ಚಂದ ಕಾಣದೆ ಇರಬಹುದು. ಆದರೆ ನಮ್ಮ ಊರಿನಲ್ಲಿ ಚಿಕ್ಕ ಸಿಳ್ಳೆ ಪಿಳ್ಳೆಗಳಿಗೇನು ಕಡಿಮೆ ಇರಲಿಲ್ಲ. ಮನೆಯಲ್ಲಿ ಪೊಂಗಲ್ ಮಾಡಿ ಮಧ್ಯಾನದ ಊಟ ಸಂಭ್ರಮದಿಂದಲೇ ಆಗಿತ್ತು. ಆದರೆ ಸಂಜೆಯ ವೇಳೆ ಆಗಲಿ ಅಥವಾ ಬೆಳಗಿನ ಸಮಯದಲ್ಲಾಗಲಿ.. ಎಳ್ಳು ಡಬ್ಬಿ ಹಿಡಿದ ಒಂದು ನರ ಪ್ರಾಣಿಯೂ ಕಣ್ಣಿಗೆ ಕಾಣಲಿಲ್ಲ. ಅದೇನೂ ಎನೋ... ಮನೆಯ ಮಜಿನ ಮೇಲೆ ಇಟ್ಟಿದ್ದ ಎಳ್ಳು ಹಾಗೆ ಬರಿದಾಗುತಿತ್ತು.. ಅದಾರೆ ಎಲ್ಲೂ ವಿನಿಮಯ ಆಗದೆ ಸೋತಿತ್ತು. ಅಂತೂ ಕೊನೆಗೂ ಮೇಲ್ಗಡೆ ಮನೆ ಹುಡುಗಿ ಎಳ್ಳು ಕೊಡಲು ಬಂದಳು. ಅವಾಗ ಅಂದುಕೊಂಡೆ... ಅಂತೂ ಸಾರ್ಥಕವಾಯ್ತು ಅಂತ.. ಆದರೆ.. ತಲೆಯಲೆಲ್ಲೂ ಒಂದು ಕಡೆ ಆ ಯೋಚನೆ ಕೊರಿಯುತ್ತಲೇ ಇತ್ತು.

ಆಗ ನಂಗೆ ಹೊಳೆದದ್ದು ಈಗಿನ ಶಿಕ್ಷಣ ಹಾಗು ಸ್ಪರ್ದಾತ್ಮಕ ಯುಗದ ಬಗ್ಗೆ. ಮಕ್ಕಳಿಗೆ ಓದುವುದು ಬರೆಯುವುದು ಬಿಟ್ಟರೆ ಮತ್ತೊಂದು ವಿಷಯದ ಕಡೆ ಕಣ್ಣಾಡಿ
ಸಲು ಸಹ ಪುರುಸೊತ್ತಿರೋದಿಲ್ಲ. ಮನೆಯಲ್ಲಿ ಒತ್ತಡ ... ಶಿಕ್ಷಕರಿಂದ ಒತ್ತಡ ...ಸಹಪಾಟಿಗಳೊಂದಿಗೆ ಬೆರೆಯಲು ನಲಿಯಲು ಸಮಯವೆ ಇಲ್ಲ. ಇದರೆಲ್ಲದರ ಜೊತೆ ವೀಡಿಯೊ ಗೇಮ್ಸ್, ಅಂತರ್ಜಾಲ ಮುಂತಾದವುಗಳಿಂದ ಮಕ್ಕಳಿಗೆ ಹೊರಗೆ ಮೈದಾನಕ್ಕೆ ಬಂದು ಆಡಲು ಪುರುಸೋತ್ತೆಲ್ಲಿರೊತ್ತೆ.

ಈ ಸಂಗತಿಯೇ ಮುಂದೊರೆದರೆ ಮುಂದೊಂದು ದಿನ ಎಳ್ಳು ಬೆಲ್ಲ ಹಂಚುವುದಂತು ದೂರದ ಮಾತು... ಎಳ್ಳು ಬೆಲ್ಲ ಕಾಣ ಸಿಗುವುದೇ ಕಷ್ಟ ಸಾಧ್ಯ ಆಗುವುದರಲ್ಲಿ ಎರಡು ಮಾತಿಲ್ಲ. ಇದಕೆಲ್ಲ ಹೊಣೆ ಯಾರು...??? ಇಲ್ಲಿ ಹೊಣೆಗಾರರನ್ನು ಹುಡುಕುವುದಕ್ಕಿಂತ ಮೊದಲು ಪರಿಹಾರದ ಕಡೆ ಹೆಜ್ಜೆ ಹಾಕಬೇಕಿದೆ.. ನಮ್ಮ ಸಂಸ್ಕೃತಿಯಲ್ಲ ಉಳಿಸಿ ಬೆಳಸಬೇಕಿದೆ.. ನಮ್ಮ ಶ್ರೀಮಂತ ಸಂಸ್ಕೃತಿಯನ್ನ ಅಲ್ಲಗಣಿಸಿ ಪಾಶ್ಚಾತ್ಯ ಸಂಸ್ಕೃತಿಯನ್ನ ಅಪ್ಪಿಕೊಳ್ಳುತ್ತಿರುವ ನವ ಪೀಳಿಗೆ.. ಅದು ಯಾವಾಗ ಎಚ್ಹ್ಚೆತ್ತಿಕೊಲ್ಲುವುದೋ ಕಾದು ನೋಡಬೇಕಿದೆ... :(