Welcome to My World of Words!!!

Pages

Wednesday, August 18, 2010

ಹೀಗೊಂದು ದಿನ..!!!J


ಹೀಗೊಂದು ದಿನ..!!!J

ಹೀಗಿತ್ತು ನಮ್ಮ ನಿಲಯದ ದಿನಗಳು… ಅಲ್ಲಿಯ ದಿನಗಳೇ ಮಧುರ… ಅಲ್ಲಿ ಕಳೆದ ಒಂದೊಂದು ದಿನಗಳು ಮುತ್ತಿನ ಹಾರದ ಮುತ್ತುಗಳಿದ್ದಂತೆ ಅದರಲ್ಲಿ ಒಂದು ಮುತ್ತನ್ನು ನಿಮ್ಮೆಲ್ಲರ ಜೊತೆ ಹಂಚಿಕೊಳ್ಳುವ ಆಸೆಯಾಗಿದೆ…J ಅದಕ್ಕೆ ಈ ಚಿಕ್ಕ ಪ್ರಯತ್ನ…J

ಬೇಸಿಗೆಯ ದಿನಗಳು ಆರಂಭವಾಗಿದ್ದವು..!!! ಊರು ಕಡೆಯಲ್ಲ ಹಲಸಿನ ಸುಗ್ಗಿ..!!! ನಮ್ಮ ನಿಲಯದಲ್ಲಿ as usual ವಣಾ ವಾತಾವರಣ… ಮೂರು ಹೊತ್ತು ತಿಂಡಿ ಊಟ, ದಿನ ಬಿಟ್ಟು ದಿನದ ಸ್ನಾನ ಸಂಧ್ಯಾವಂದನೆ, ದಿನನಿತ್ಯದ ಕಾಲೇಜು… ಹೀಗೆ ದಿನಗಳು ಉರುಳುತಲಿದ್ದವು. ಸ್ನಾನದ ವಿಷಯ ಬಂದ ಕೂಡಲೇ ನೆನಪಾಯ್ತು…ನಮ್ಮಲ್ಲಿ ದಿನ ಬಿಟ್ಟು ದಿನ ಆಟವ ದಿನಗಳು ಬಿಟ್ಟು ಮಾಡುವ ಸ್ನಾನಕ್ಕೆ ಒಂದು ಬಲವಾದ ಕಾರಣ ಇದೆ..!!! ಅದೇನಂದರೆ… ನಾವೆಲ್ಲ ಬ್ರಾಹ್ಮಣ ಬ್ರಹ್ಮಚಾರಿಗಳು…ಇಂಜಿನಿಯರಿಂಗ್ ದಿನಗಳು ಅಂದರೆ ಅದು ಮೊದಲೇ ಯವ್ವನಾವಸ್ತೆಯ ತೊಟ್ಟ ತುದಿಯಲ್ಲೀರುವ ವಯಸ್ಸು. ಮನುಷ್ಯ ಇಲ್ಲಿ ತಪ್ಪುಗಳನ್ನು ಮಾಡುವುದು ಸಹಜ… ಆ ಸಹಜತೆಯನ್ನ ಸಹಜವಾಗಿಯೇ ದೂರವಿಡಲು ಅಸಹಜ ರೀತಿಯಿಂದ ನಮ್ಮ ಈ ಪ್ರಯತ್ನ. ನಮ್ಮ ನಿಲಯದ ಹುಡುಗರ ಮೇಲೆ ಕಾಲೇಜಿನಲ್ಲಿ ಎಲ್ಲರಿಗು ಕೆಂಗಣ್ಣು. ನಲನೆಯರೆಲ್ಲ ಈ ಹುಡುಗರ ಜೊತೆ ಬೆರೆಯುವುದನ್ನು ಸಹಿಸಲಾಗುತ್ತಿರಲಿಲ್ಲ. ಸುಮ್ಮನೆ ಮನಸ್ತಾಪ ದ್ವೇಷ…. ಇವೆಲ್ಲ ಬೇಡವೆಂದೇ….ನಮ್ಮ ಈ ಅಸಹಜ ಪ್ರಯತ್ನ …J

ಏನು ಮಾಡುವುದು....ನಮ್ಮ ಪ್ರಯತ್ನ ನಮ್ಮದು....ಫಲ ದೇವರಿಗೆ ಬಿಟ್ಟಿದ್ದು..!!!Jಬೆಲ್ಲವನ್ನ ಸಗಣಿಯಲ್ಲಿ ಹಾಕಿದರೆ ಇರುವೆ ಮುತ್ತುವುದಿಲ್ಲವೇ…??? ಹಹ… ಗ್ರೇಟ್ ಲಾಜಿಕ್ ಅಲ್ವ…J ಎಲ್ಲ ನನ್ನ ಸೃಷ್ಟಿ ...ಸ್ವಲ್ಪ adjust ಮಾಡ್ಕೊಳಿ... ಅವಾಗ್ ಅವಾಗ PJಗಳು ಬರುತ್ತಿರುತ್ತವೆ… ಏನ್ ಮಾಡೋದು... ನಮ್ಮ ಹಾಸ್ಟೆಲ್ನಿಂದ ಅಂಟಿಕೊಂಡ ಗೀಳು… J

ಕ್ಷಮಿಸಿ..ಟಾಪಿಕ್ ಯಿಂದ ಸ್ವಲ್ಪ ಹೊರ ನಡೆದಿದಕ್ಕೆ…. ಹಮ್ ನಮ್ಮಲ್ಲಿ ಒಂದು ವಳ್ಳೆ ನಡತೆ ಇತ್ತು… ಅದೇನಂದರೆ ನಮ್ಮಲ್ಲಿ ಯಾವ ಹುಡುಗರ ಪಾಲಕರೇ ಬಂದರೂ ಸರಿ… ಅವರಿಗೆ ಎಲ್ಲಿಲ್ಲದ ವಿನಯತೆ, ಅದಾರ ಆಥಿತ್ಯ ಸಿಗುತಿತ್ತು… ಅವರಿಗೆ ತುಂಬಾ ಗೌರವ ಕೊಡುತ್ತಿದ್ದೆವು…J

ಅವತ್ತೊಂದು ದಿನ.. ಚಿನ್ಮಯ್ ಹೆಗಡೆ (ಚಿನ್ನು).. ಅವನ ತಂದೆ ನಮ್ಮ ನಿಲಯದಲ್ಲಿ ತಂಗಿದ್ದರು..!!! ಅವರೊಂದು ಹಲಸಿನ ಹಣ್ಣನ್ನು ಮಗನಿಗೆ ಅಂತ ದೂರದ ಸಿದ್ದಾಪುರದಿಂದ ಬಗಲೇರಿಸಿಕೊಂಡು ಬಂದಿದ್ದರು... ನಾವುಗಳು ನಿಲಯಕ್ಕೆ ಯಾವಾಗಲೇ ಊರಿಂದ ಬಂದರೂ ಸರಿ…ಏನಾದರು ತಿಂಡಿ ತಿನಸನ್ನು ಜೋಳಿಗೆಯಲ್ಲಿ ಜಮಾಯಿಸಿಕೊಂಡೆ ಬರುತ್ತಿದ್ದೆವು. ಅದನ್ನ ನಿಲಯದಲ್ಲಿ ಎಲ್ಲರು ಹಂಚಿ ತಿನ್ನುತ್ತಿದ್ದೆವು… ಅದು ನಿಲಯದ ವಾಡಿಕೆ…J ಅಂದು ಸಾಯಂಕಾಲದ ಸಮಯ… ಹಲಸಿನ ಹಣ್ಣನ್ನು ಬಿಡಿಸಿ ಸೊಳೆಯನ್ನ ಪ್ಲೇಟ್ ಒಂದರಲ್ಲಿ ತುಂಬಿ ಮದ್ಯದಲ್ಲಿತ್ತು ನಮ್ಮನೆಲ್ಲ ಕರೆದ… ಮನೆಯಲ್ಲಿ ನನಗೆ ಹಲಸಿನ ಬಗ್ಗೆ ಹೆಚ್ಚು ವಲವಿಲ್ಲದಿದ್ದರು… ನಿಲಯದ ಮಾತೇ ಬೇರೆ… ಅಲ್ಲಿ ಮಣ್ಣು ಕೊಟ್ಟರೂ ಕುಶಿಯಿಂದ ತಿನ್ನುತಿದ್ದೆವು …J ಅದೇನೂ ಕುಶಿ … ಅದೇನೂ ಅದರದೇ ಆದ ಚಂದ…J

ಹಮ್ ಎಲ್ಲರನ್ನು ಕರೆದಾಯ್ತು… ಎಲ್ಲರು ಶಿಸ್ತಿನ ಸಿಪಾಯಿಗಳಂತೆ ಅವನ 12’ X 7’5’’ ಕೋಣೆಯಲ್ಲಿ ಏಕತ್ರಿತರಾದೆವು… ಅವನ ತಂದೆಮದ್ಯದಲ್ಲಿ ಕುರ್ಚಿಯ ಮೇಲೆ ದಿನಪತ್ರಿಕೆ ಓದುತ್ತ ಕುಳಿತಿದ್ದರು. ಹಾಗಾಗಿ ನೋವೆಲ್ಲ ತುಟಿ ಪಿಟಕ್ಕೆನ್ನದೆ ಸಾಲಾಗಿ ಗೋಡೆಗೆ ಅಂಟಿ ನಿಂತಿದ್ದೆವು. ಆಹಾ ಏನು ವಿನಯತೆ….!!! ಅವರು ಅಂದುಕೊಂಡಿರಬೇಕು… ಮಕ್ಕಳೆಂದರೆ ಹೀಗಿರಬೇಕು… ಸಂಸ್ಕಾರ ಎನ್ನುವುದು ಹುಟ್ಟಿನಿಂದಲೇ ರಕ್ತಗತವಾಗಿ ಬಂದಿದೆ ಎಂದು.. ಹಹ… ನಮ್ಮವರೆಲ್ಲ ಹಾಗೆ ಇದ್ದರು ಕೂಡ… ನಿಂತು ಕ್ಷಣಗಳುರುಳಿ ನಿಮಿಷವಾಯಿತು. ಎಲ್ಲರು ಪಿಸುಮಾತಿನಲಿ ತಮ್ಮ ತಮ್ಮ ಮಾತುಗಳನ್ನ ಕ್ಷಿಣಿಸಿಬಿಟ್ಟಿದ್ದರು….ಹೇಗೆ ಹಲಸಿನ ಸೊಳೆಯನ್ನ ತಿನ್ನುವುದು??? ಯಾರು ಮುಂಚೆ ತಿನ್ನುವರು??? ಯಾರು ಬೆಕ್ಕಿಗೆ ಘಂಟೆ ಕಟ್ಟುವರು ಅನ್ನೋದೇ ಪಿಸುಮಾತಿನ ಒಳಗುಟ್ಟು…J ಚಿನ್ನುವಿನ ತಂದೆ ನೋಡುವಸ್ಟು ನೋಡಿದರು…ಕೊನೆಗೆ ಅವರೇ ಯಾಕೆ ಸುಮ್ಮನೆ ನಿಂತಿದ್ದೀರ…ಇದೆಲ್ಲ ನಿಮಗಾಗಿಯೇ… ತಗೋಳಿ ಎಂದು ಒಂದು ಮಾತು ಅಂದರು.ಅದನ್ನು ಕೇಳಿದ್ದೆ ತಡಮಾಡದ ನಮ್ಮ ಶಿಸ್ತಿನ ಸಿಪಾಯಿಗಳು ಬರಗೆಟ್ಟ ಹದ್ದುಗಳ ಹಾಗೆ ಮುಗಿಬಿದ್ದರು…J ನಾ ಮುಂದು ತಾ ಮುಂದು ಎಂದು ನೂಕು ನುಗ್ಗಲು ಆ ಪ್ಲೇಟ್ಗಾಗಿ …ಹಹ …ನನಗಿನ್ನೂ ಆ ದೃಶ್ಯ ಹಚ್ಚು ಹಸಿರಾಗಿದೆ…J ಅಹ್ಹಾ …!!! ಅದನ್ನು ನೋಡಿ ಅವನ ತಂದೆ ಬೆರಗಾದರು …Jಮೂಗಿನ ಮೇಲಿನ ಚಸ್ಮ ದಿನಪತ್ರಿಕೆಯನ್ನ ಓದುತ್ತಲೇ ಇತ್ತು … ಆದರೆ ಕಣ್ಣುಗಳು ಹಸಿದ ಹೆದ್ದುಗಳ ಕಡೆಗೆ ನೋಡುತ್ತಿದ್ದವು…J ಆದರೆ ಆಹದ್ದುಗಳಿಗೆ ಪ್ರಪಂಚದ ಪರಿವೆ ಇರಲಿಲ್ಲ ...ಅವರಿಗೆ ನಂಬುವುದೇ ಕಷ್ಟ ಸಾಧ್ಯವಾಯಿತು …ಒಂದು ನಿಮಿಷದ ಹಿಂದೆ ಎಷ್ಟು ಚೆನ್ನಾಗಿ ಮೌನವಾಗಿ ನಿಂತಿದ್ದ ಹುಡುಗರು ನಿಮಿಷಾರ್ಧದಲ್ಲೇ ಇದ್ದ ಹಲಸಿನ ಸೂಳೆಗಳೆಲ್ಲ ಮಂಗ ಮಾಯಾ ಮಾಡಿ ನೆಕ್ಕಿ ನೀರು ಕುಡಿದಿದ್ದರು ಅಂತ…Jಎಲ್ಲರು ಚಿನ್ನುವಿಗೆ thanksale ಎಂದು ಹೊರ ನಡೆದರೂ … ಇದನೆಲ್ಲ ನೋಡುತಿದ್ದ ಚಿನ್ನುವಿನ ತಂದೆ ತುಸು ನಕ್ಕರು…J ಮತ್ತೆ ದಿನಪತ್ರಿಕೆಯ ಕಡೆ ತಮ್ಮ ಗಮನ ಹರಿಸಿದರು…J