Welcome to My World of Words!!!

Pages

Saturday, July 24, 2010

Ravan...!!! A different crush story...!!!J

Ravan...!!! A different crush story...!!!J
(Please view it in Mozilla Firefox Browser...)

ಪ್ರಿಯ ಓದುಗರೆ, ನೀವುಗಳು ಇಲ್ಲಿಯ ತನಕ ಅನೇಕ crush storyಗಳನ್ನ ಕೇಳಿದ್ದೀರ. ಯಾವಾಗಳು ಯಾವದೋ ಒಬ್ಬ ಹುಡುಗ ಒಬ್ಬ ಹುಡುಗಿಯನ್ನ ನೋಡ್ತಾನೆ. ಟಕ್ ಅಂತ ಅವನಿಗೆ ಅವಳ ಮೇಲೆ ಫೀಲಿಂಗು. ಕ್ ಅಂತ ಅವಳಿಗೆ ಅವನ ಮೇಲೆ ಫೀಲಿಂಗು. ಕೇಳಿ ಕೇಳಿ ಬೋರ್ ಆಗಿರಬೇಕಲ್ಲ. ಹಾಗಿದ್ದರೆ ಈ ಎರಡೂವರೆ ಘಂಟೆಯ ಪಯಣದ ಕಥೆ ಓದಿ. ಹೊಸ ಅನುಭವ ನಿಮಗಾಗಿಕಾದಿದೆ. ನೆತ್ತಿಯಿಂದ ತಣ್ಣನೆಯ ಬೆವರಿನ ಧಾರೆ ತನ್ನ ಧಾರಿಯನ್ನು ಕಾಲಿನ ಬುಡ ಮುಟ್ಟಲು ತಡಕಾಡುತಿತ್ತು. ಗಡಿಯಾರದ ಮುಳ್ಳು ೧ ಮತ್ತು ೨ರ ಮಧ್ಯ ಅಸಹಾಯಕವಾಗಿ ಬಿದ್ದಿತ್ತು. ಸೂರ್ಯನು ತನ್ನ ಸಹಜ ನಗೆಯನ್ನು ಬೀರುತ್ತ ಅಣಕವಾಗಿ ನೋಡುತ್ತ ನಿಂತಿದ್ದ ನನ್ನ ಹಿಂದೆ. ನಾನು ಮಸ್ಕತ್ತಿನಿಂದ ಸೋಹಾರಕ್ಕೆ ಬರಬೇಕಿತ್ತು. ನನ್ನ ಕಂಪನಿ ಡ್ರೈವರ್ ಮುಸ್ಕತ್ತಿನ ಅಂಚಿನಲ್ಲಿ ನನ್ನನ್ನು ಮುಟ್ಟಿಸಿ ತನ್ನ ಸೇವಯನ್ನ ಅಂತ್ಯಗೊಳಿಸಿದ್ದ. ಬಾಡಿಗೆ ಕಾರೊಂದನ್ನು(taxi) ಹಿಡಿದು ಬರಬೇಕಿತ್ತು. ನನ್ನ ಕಂಪನಿ ಕಾರ್ ಇಳಿದದ್ದೇ ತಡ, ಅಲ್ಲಿ ಇದ್ದ (taxi) ಡ್ರೈವರ್ಗಳೆಲ್ಲ ಬೆಲ್ಲಕ್ಕೆ ಮುತ್ತುವ ಇರುವೆಯ ಹಾಗೆ ಮುತ್ತಿದರು. ಅದರಲ್ಲಿ ಒಬ್ಬ ಮಹಾ ಧಡೂತಿ ಆಸಾಮಿ ಒಬ್ಬ ಇದ್ದ. ಅವನೇ ಈ ಕಥೆಯ ಕಥಾನಾಯಕ.ರಾವಣ..J

ದೊಡ್ಡ ದೊಡ್ಡ ಕಣ್ಣುಗಳು,ಅಜಾನುಬಾಹು, ಧಡೂತಿ ದೇಹ ೬೫ರ ಆಸುಪಾಸಿನಲ್ಲಿ ವಯಸ್ಸು, ಹಣ್ಣಾದ ಬಿಳಿ ಗಡ್ಡ ಮುಖವನ್ನ ಮುಕ್ಕಾಲು ಭಾಗ ಆವರಿಸಿತ್ತು ಇನ್ನುಳಿದ ಕಾಲು ಭಾಗವನ್ನ ಕಣ್ಣು ಮೂಗು ಕಿವಿ ಹಣೆ... ತಮ್ಮ ತಮ್ಮ ಭಾಗಗಳನ್ನ ಹಂಚಿಕೊಂಡಿದ್ದವು.ಹತ್ತು ತಲೆ ಇಲ್ಲ ಅನ್ನುವುದೊಂದು ಬಿಟ್ಟರೆ ಮತ್ತೆಲ್ಲ ರಾವಣನ ತದ್ರೂಪಿ.

ನನ್ನ ನೋಡುತ್ತಿದ್ದಂತೆ ಅದೇನು ಆವೇಶ ಬಂತೋ ಆ ೧೦೦ರ ಶರೀರದಲ್ಲಿ ನಾ ಕಾಣೆ. ಆ
ಧಡೂತಿ ದೇಹ ತನ್ನ ಸಂತುಲನವನ್ನ ಕಾಯ್ದುಕೊಂಡೆ ನನ್ನ ಬಳಿ ಓಡಿ ಬಂದು ತನ್ನ ಕಾರಲ್ಲೇ ಸೋಹಾರಿಗೆ ಬನ್ನಿ ಎಂದು ಗೊಗೆರೆಯಲಾರಂಭಿಸಿದ. ನಾನು ಹೇಗಿದ್ದರೂ ಸೋಹಾರಕ್ಕೆ ಹೋಗಬೇಕಿತ್ತು. ಬಿಸಿಲು ಬೇರೆ ನೆತ್ತಿಯನ್ನ ಕಾಯಿಸುತ್ತಿತ್ತು. ಎರಡು ಮನಸ್ಸು ಮಾಡದೆ ಒಂದು ಕಾಲನ್ನು ಒಳಗಿರಿಸಿದೆ. ಅಸ್ಟೊತ್ತಿನಲ್ಲೇ ಸ್ವಲ್ಪ ದೂರದಲ್ಲಿ ನನ್ನ ಕಂಪನಿಯ ಡ್ರೈವರ್ ಒಬ್ಬ taxi ಇಟ್ಟಿದ್ದನ್ನು ನೋಡಿದೆ. ನನ್ನ ಚೀಲವನ್ನ ಒಳಗಿರಿಸಿ ಆತನನ್ನು ನೋಡಿ ತುಸು ನಕ್ಕಿದೆ. ಆತನು ನನ್ನ ನಗುವನ್ನ ತಿಳಿಯಾಗಿಯೆ ಸ್ವಾಗತಿಸಿದ. ಅದನ್ನ ಕಂಡ ಈ ರಾವಣ ಕೆಂಡ ಮಂಡಲನಾದ. ಎಲ್ಲಿ ತನ್ನ ಗೂಡಿಗೆ ಬಂದ ಹಕ್ಕಿ ಹಾರಿ ಹೋಗುವುದೆಂದು ನಾನು ಭಾರತೀಯ ಎಂದು ತಿಳಿದು ನನ್ನ ಬಳಿ ಹಿಂದಿಯಲ್ಲಿ ಮಾತನಾಡಲು ಆರಂಭಿಸಿದ. ಏದುಸಿರು ಬಿಡುತ್ತ ಕಣ್ಣುಗಳನ್ನ ಕಮಲದಂತೆ ಅರಳಿಸಿ ಯಾರೋ ತನ್ನೆರಡು ಕಿಡ್ನಿಗಳನ್ನೇ ಕೇಳಿದರೋ ಎಂಬ ಬಾಸವಾಗುವಂತೆ ಇತ್ತು ಅವನ ಹಾವ ಭಾವಗಳು...ಆಹಾ ಅದನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಅವನಿಗೆ ಹಿಂದಿಯಲ್ಲಿಯೇ ತಿಳಿ ಹೇಳಿದೆ. ಅವನು ನಮ್ಮ ಕಂಪೆನಿಯವನು...ನಾಲ್ಕು ಮಾತನ್ನಾಡಿ ಬರುವೆ ಎಂದೆ. ಹಹ ಆಸಾಮಿ ಕೇಳಬೇಕಲ್ಲ...ಕಾಲೆತ್ತಲೇ ಬಿಡಲಿಲ್ಲ. ಸರಿ ಅಂತ ಒಳಗೆ ಕೂತೆ.

೫ ನಿಮಿಷದ ನಂತರ ಅಸಾಮಿ ಬಂದು ತನ್ನ ಆಸನವನ್ನ ಅಲಂಕರಿಸಿದ... ಆಹಾ ಅವನಿಗೆ ಹೇಳಿ ಮಾಡಿಸಿದ ಆಸನ ಅದು. ಅವನ ಬಾಹುಗಳು ಆಸನದ ಎರಡು ಅಂಚನ್ನು ಕಾಣದಂತೆ ಮುಚ್ಚಿದ್ದವು. ಅವನ್ನ ಉಧರ ಸ್ಟೇರಿಂಗನ್ನ ತಬ್ಬಿ ಹಿಡಿದಿತ್ತು. Airbag ಉಪಯೋಗವನ್ನ ನಿಷ್ಕ್ರಿಯಗೊಳಿಸಿತ್ತು ಆ ಹೊಟ್ಟೆ. ಕಾರ್ ಸ್ಟಾರ್ಟ್ ಮಾಡಿಯೇ ಬಿಟ್ಟ.

ದಾರಿಯುದ್ದಕ್ಕೂ ನನ್ನೊಡನೆ ಮಾತೋ ಮಾತು. ಹಿಂದಿಯನ್ನು ಅವನ ಏದುಸಿರಲ್ಲಿ ಅರ್ಧ ತಿಂದು ಇನ್ನು ಉಳಿದರ್ಧ ಹೊರಹಾಕುತ್ತಿದ್ದ. ಆ ಅರ್ಧದಲ್ಲಿ ಅರ್ಧ ನನಗರ್ಥವಾಗುತಿತ್ತು. ನನ್ನನ್ನು ಮುಂದಿನ ಸೀಟಿನಲ್ಲೇ ಕೂರಿಸಿಕೊಂಡಿದ್ದ. ನನಗೋ ಒಳಗೊಳಗೇ ನಗು. ಏನು ಮಾಡಲಿ. ಒಳ್ಳೆ ಇಲಿ ಮರಿಯನ್ನ ಹಿಡಿದು ಬೋನಿಗೆ ಹಾಕಿದ ಹಾಗಿತ್ತು ನನ್ನ ಅವಸ್ಥೆ. ಮದ್ಯದಲ್ಲಿ ಅಗೋಚರ ಅಪರಿಚಿತ ಅರಬ್ಬೀ ಹಾಡು ಬೇರೆ. ಕುರಿನ ಬಲಿ ಕೊಡೋಕ್ಕೆ ಕರಕೊಂಡು ಹೊರಟಾಗ ಪಕ್ಕದಲ್ಲಿ ಆಸಾದಿ ಕುಣಿದಂತಿತ್ತು ನನ್ನ ಕಥೆ.

ದೂರ ಸಾಗಿದಂತೆ ರಾವಣ ರಾಮನಾಗ ತೊಡಗಿದ. ನನ್ನ ಬಗ್ಗೆ ನನ್ನ ಜೀವನಚರಿತ್ರೆ ಬರಿಯುವಸ್ಟು ಮಾಹಿತಿ ಸಂಗ್ರಹಿಸಿದ್ದ. ನಾನು ಏನು ಕೆಲಸ ಮಾಡ್ತೀನಿ, ಯಾವ ಕಂಪನಿಯಲ್ಲಿ ಕೆಲಸ ಮಾಡ್ತೀನಿ, ಆಫೀಸ್ ಎಲ್ಲಿದೆ ಮನೆ ಎಲ್ಲಿದೆ...ಹೀಗೆ ಹತ್ತೆಂಟು ವಿವರಗಳನ್ನ ಕೇಳುತ್ತಾ ಸಾಗಿದ್ದೆವು.

ಘಂಟೆಯ ಪಯಣದ ನಂತರ ಅದೆಲ್ಲೋ ಒಂದು ಸಾಧಾರಣ ಅಂಗಡಿಯ ಮುಂದೆ ತನ್ನ ಕಾರನ್ನು ನಿಲ್ಲಿಸಿದ. ತಿನ್ನುವುದಕ್ಕೆ ಏನಾದರು ಬೇಕಿದ್ದರೆ ಹೇಳು ಅಂದ. ನನಗೆ ಈ ಮನುಷ್ಯ ಯಾಕೆ
ಇಸ್ಟೊಂದು ಪ್ರೀತಿ ತೋರಿಸುತ್ತಿದ್ದಾನೆ ಎಂದು ಗೊತ್ತಾಗಲೇ ಇಲ್ಲ. ಸಹಜವಾಗಿ ಇಲ್ಲಿಯ ಜನರನ್ನು ಒರಟು ಸ್ವಭಾವಕ್ಕೆ ಹೋಲಿಸುತ್ತಾರೆ ಆದರೆ ಈ ಮನುಷ್ಯ ತದ್ವಿರುಧ್ಧವಾಗಿದ್ದ.... ನಾನು ಅಂಗಡಿಯ ಹೊಕ್ಕಿದೆ. ನನಗೆ ಬೇಕಾದ ತಿನಿಸುಗಳನ್ನ ತೆಗೆದುಕೊಂಡೆ. ಆತನಿಗೂ ಏನಾದರು ಬೇಕ ಎಂದು ಕೇಳಿದೆ.. ಅದಕವನು ಜೀಬಿನಿಂದ ೧ ರಿಯಾಳನ್ನು ತೆಗೆದು ತನಗೊಂದು ರಿಚಾರ್ಜ್ ಕಾರ್ಡ್ ಬೇಕೆಂದ. ಅವನಿಗೆ ಕಾರ್ಡ್ ಕೊಟ್ಟು ನಾನು ಕಾರನ್ನ ಏರಿದೆ.
ತುಸು ದೂರ ಚಲಿಸಿದೆವು. ನನ್ನ ಮೊಬೈಲ್ ಜೀವ ಕಳೆದುಕೊಳ್ಳುವ ಸ್ಥಿತಿಯಲ್ಲಿತ್ತು . ಅದಕ್ಕೆ ಜೀವ ಉಣಿಸಲು ಕಾರಲ್ಲೇ ಇದ್ದ ಚಾರ್ಜೆರ್ ಕಂಡುಬಂತು. ರಾವಣ ಕಾರಿನಲ್ಲಿ ಚಾರ್ಜರ್ ಕಂಡುಬಂತು. ನನಗಾಗಲೇ ಅದೇನೂ ಅವನೆಂದರೆ ಆ ಭಯವೇ ಇರಲಿಲ್ಲ. ನನಗವನು ನನ್ನ ಸ್ವಂತ ಅಜ್ಜನ ಹಾಗೆ ಕಂಡ. ಅವನಿಂಗೆ ಹೇಳದೆ ಕೇಳದೆ ಅವನ ಕಾರಲ್ಲಿದ್ದ ಚಾರ್ಜರನ್ನ ಉಪಯೋಗಿಸಿಕೊಂಡೆ. ಅವನು ಏನು ಹೇಳಲಿಲ್ಲ. ಬದಲಿಗೆ ಚಾರ್ಜರನ್ನು ಸರಿ ಮಾಡಿ ಕೊಟ್ಟ ... ಅದೇನೂ ಗೊತ್ತಿಲ್ಲ ಅಂತ ಧಡೂತಿ ಆಸಾಮಿಯಲ್ಲೂ ನಾನು ಅದೆಂತಹದೋ ಕಾಣದ ಮೃಧು ಮನಸ್ಸನ್ನ ಕಂಡೆ.

೨ ಘಂಟೆ ಕಳೆಯಿತು . ನನ್ನ ೨೦೦ ಕಿ.ಮೀ ದೂರದ ಪಯಣ ಮುಕ್ತಾಯದ ಹಂತದಲ್ಲಿತ್ತು. ಅಲ್ಲಿಂದ ನಾನು ನನ್ನ ಆಫೀಸಿಗೆ ಹೋಗಲು ಇನ್ನೊಂದು ಟ್ಯಾಕ್ಷಿ ಹಿಡಿಯಬೇಕಿತ್ತು . ಅವನಿಗೆ ಆಗಲೇ ನನ್ನ ಬಗ್ಗೆ ಎಲ್ಲ ತಿಳಿದಿತ್ತು. ನಾನು ಸ್ಟಾಪ್ ಬಂದ ಕೂಡಲೇ ಇಳಿಯಲು ಮುಂದಾದೆ. ಅವನು... ಇಲ್ಲಿಂದ ನಿನ್ನ ಆಫೀಸ್ಗೆ ಯಾರು ಬರೋದಿಲ್ಲ ಅಂದ. ತಾನೇ ಅಲ್ಲಿಯ ವರೆಗೂ ಬರುವುದಾಗಿಯೂ ಹೇಳಿದ. ಅದು ಯಾಕೋ ಗೊತ್ತಿಲ್ಲ ...ಅವನಿಗೆ ನನ್ನ ಕಂಡರೆ ಅದೇನು ಅಕ್ಕರೆಯೋ ನಾ ಕಾಣೆ. ನನ್ನನ್ನ ನನ್ನ ಆಫೀಸ್ ವರೆಗೂ ಜೋಪಾನವಾಗಿ ತಂದು ಬಿಟ್ಟ. ನಾನು ದುಡ್ಡು ಕೊಡಲು ಹೋದಾಗ ಅದರಲ್ಲೇ ಚಿಲ್ಲರೆ ವಾಪಾಸ್ ಕೊಡಲು ಬಂದ... ನಿಜ ಹೇಳ ಬೇಕಂದರೆ ನಾನು ಅವನಿಗೆ ನಾನು ಕೊಟ್ಟಿದ್ದು ಸೂಹಾರದ ವರೆಗಿನ ಚಾರ್ಜು ಬಟ್ ಅವನು ಅದರಲ್ಲೂ ವಾಪಸ್ ಕೊಡಲು ಬಂದ...ಕಾರಿನ್ನಿಂದ ಕೆಳಕ್ಕಿಲಿದೆ. ಅವನು ಕಾರು ತಿರುಗಿಸಿ ಟಾಟ ಮಾಡಿ ಹೊರಟೇ ಹೋದ.

ಈಗಿನ ಈ ದುಬಾರಿ ಕಾಲದಲ್ಲೂ ಗುರ್ತಿಲ್ಲದೆ ಇದ್ದವರಿಗೂ ಇಸ್ಟೊಂದು ಔಧಾರ್ಯ ಸಿಗುತ್ತದೆ ಅಂದರೆ ನಂಬಲು ಸಾಧ್ಯವೇ.. ಆ ಅಜ್ಜ ಯಾಕೆ ಅಸ್ಟೊಂದು ಪ್ರೀತಿ ತೋರಿಸಿದ??? ಅವನು ನಿಜವಾಗಲೂ ರಾವಣನ ??? ನನಗೆ ಮುಂಚೆ ಅದೆಸ್ಟೋ ಹುಡುಗೀರು crush ಗಳಾಗಿ ಹೋಗಿದ್ದುಂಟು. ಆದರೆ ಇದು ಒಂದ್ ತರ ಬೇರೆ .. All together a different crush story...:) ಹೊಸ ರೀತಿ ಅನುಭವ..!!!!

ಸಲಾಂ ವಾಲೆಕುಂ ..!!! ಅಂದ ಗೇಟಿನ ಗಡಿ ಹತ್ತಿರ ಹೋದಂತೆ...ಅಲ್ಲಿದ್ದ ವಾಚ್ಮೆನ್ !!!.... ನಾನು ತುಸು ನಗೆಯನ್ನು ಚೆಲ್ಲಿ ಸಲಾಂ ಎಂದು ಒಳ ನಾಡಿದೆ...:)