Welcome to My World of Words!!!

Pages

Thursday, July 8, 2010

ಆಷಾಡದ ಬಿಸಿಲು ..!!!


ಆಷಾಡದ ಬಿಸಿಲು ..!!!


ಪ್ರಿಯ ಓದುಗರೇ… ಮಲೆನಾಡಿನ ಮಳೆಯ ತಂಪನ್ನು ಅಹ್ಲಾದಿಸುತ್ತಿರುವ ಮಲೆನಾಡಿನ ಸಮೃದ್ಧ ಜನತೆಯೇ , ಮಳೆಯನ್ನೂ ಕಂಡು ಹೊಸ ಹೊಸ ಪ್ರೀಮ ಪತ್ರ ಕವನಗಳನ್ನ ಬರಿಯುತ್ತಿರುವ ಪ್ರೇಮಿಗಳೇ , ಮಳೆಯ ವಿವಿಧ ರೂಪಗಳನ್ನ ತಮ್ಮ ಜೀವನದ ವಿವಿಧ ಹಂತಗಳಿಗೆ ಹೋಲಿಸಿ ರಸಮಯ ಲೇಖನಗಳನ್ನು ಹೊರಹಾಕುವ ಬರಹಗಾರರೆ, ಮಳೆಯ ಮೇಲೆ ಚಲನ ಚಿತ್ರಗಳನ್ನ ರೂಪಿಸುವ ಚಿತ್ರೋದ್ಯಮದವರೇ …ಮಳೆಯ ರಭಸಕ್ಕೆ ವಿಚಲಿತಗೊಂಡ ಆಫೀಸಿಗೆ ಹೋಗಲು ವದ್ದಾಡುತ್ತಿರುವ tension ಪ್ರಾಣಿಗಳೇ , ಮಳೆಯಿಂದಾಗಿ ಕೆಲಸ ನಿಂತಿದೆಯಂದು ತಲೆ ಕೆಡಿಸಿಕೊಂಡು ಕೂತಿರುವ ಕಾಮಗಾರಿ ಕಾರ್ಮಿಕರೆ…… ಎಲ್ಲರು ಮಳೆಯ ಬಗ್ಗೆ ಚಿತ್ರ ವಿಚಿತ್ರ ಅನುಭವವನ್ನ ಹಂಚಿಕೊಂಡಿದ್ದಾರೆ. ನಾನು ಸಹ ಇಲ್ಲಿ ಮಳೆಯ ಬಗ್ಗೆ ಒಂದು ಬ್ಲಾಗ್ ಬರಿಯುವ ಅಂತನೆ ಕೂತೆ. ಆದರೆ ಇಲ್ಲಿಯ ಶೆಕೆಗೆ ನನ್ನ ಆಲೋಚನೆಗಳೆಲ್ಲ ಬತ್ತಿ ಹೋಗಿದ್ದವು. ನನ್ ಮಗಂದು ಪೆನ್ನಲ್ಲಿ ಶಾಹಿ ಕೂಡ ಬರಿದಾಯಿತು. ಕಾರಣ ಇಲ್ಲಿಯ ಧಗೆ. ಅದಕ್ಕೆ ಈ ಆಷಾಡದ ವಿವಿಧ ಬಣ್ಣಗಳನ್ನ ನಿಮ್ಮ ಮುಂದೆ ಇಡಲು ನಿರ್ಧರಿಸಿದೆ .. J

ಹಹ….. ಒಮಾನ್ ದೇಶ ,………..ಇಲ್ಲಿ ನನ್ನ ವಾಸ… ಈಗ ಇಲ್ಲಿ ಆಷಾಡದ ಚುರುಕು ಆಗಲೇ ಮುಟ್ಟಿದಂತಿದೆ
೩೬೦ ಡಿಗ್ರೀಯಲ್ಲೂ ಮರಳು ೩೬೫ ದಿನಗಳ ಮೈ ನರವೆಳಿಸುವ ತಾಪ….ರಸ್ತೆಯ
ಎಡ ಬಲಕ್ಕೆ ಎದ್ದು ನಿಂತ ಖರ್ಜೂರದ ಮರಗಳು . ಹಮ್… ಇನ್ನು ಇಲ್ಲಿಯ ಬಿಸಿಲು… ಅಬ್ಬಾ..ಚಿಕ್ಕಂದಿನಿಂದ ದೂರದರ್ಶನದಲ್ಲಿ ನೋಡುತ್ತಿದ್ದೆ..೪೦ ಡಿಗ್ರೀ …೪೫ ಡಿಗ್ರೀ ಎಂದು… ಅದೂ ದೂರ ದೆಹಲಿಯಲ್ಲಿ ….ಆದರೆ ನಾನಿದ್ದ ಪ್ರದೇಶದಲ್ಲಿ ೩೦ ರಿಂದ ಅತೀ ಹೆಚ್ಚು ಅಂದರೆ ೩೫ರ ತನಕ ಅಸ್ಟೆ ಕಂಡಿದ್ದೆ. ಆದರೆ ಇಲ್ಲಿ ಚಳಿಗಾಲದಲ್ಲೂ ೩೦ ತಕ್ಕಿಂತ ಹೆಚ್ಚೇ ಸಿಗುವುದು. ಬೇಸಿಗೆಯಲ್ಲಂತೂ ಕೇಳುವುದೇ ಬೇಡ . ಬೇಸಿಗೆಯಲ್ಲಿ ತಾಪಮಾನ ಮೊದಲ ದರ್ಜೆಯಲ್ಲಿ ತೆಲ್ಗದೆಯಾಗುತ್ತದೆ ಈ ದೇಶದಲ್ಲಿ. ಅಂದರೆ ಗರಿಷ್ಠ ೬೦ ಮುಟ್ಟಿದರೂ…ಆಚರಿಯೇನು ಇಲ್ಲ . ಈಗಾಗಲೇ ೫೭ ಮುಟ್ಟಿ ತನ್ನ ಪ್ರಖರತೆಯನ್ನ ತೋರಿಸಿ ಆಗಿದೆ.

ಬೆಳಗಿನ ಜಾವ ೪.೩೦ಕ್ಕೆಲ್ಲ ಬೆಳಗಾಗಿ ಬಿಡುತ್ತದೆ. ಸಂಜೆ ೭.೩೦ ಆದರೂ ಕತ್ತಲು ಆವರಿಸುವುದಿಲ್ಲ. ಇದು ಇಲ್ಲಿನ ಬೇಸಿಗೆಯ ದಿನನಿತ್ಯದ ಕಥೆ. ಈ ಜರ್ಜರಿಸುವ ಬಿಸಿಲಿನ ತಾಪದಲ್ಲಿ ಕೆಲಸ ಮಾಡುವರ ಆ ಬಡಪಾಯಿ ಕಾರ್ಮಿಕರ ಕಥೆ ಹೇಳ ತೀರದು. ಬೆಳಿಗ್ಗೆ ೬ ರಿಂದ ಕೆಲಸ ಆರಂಬವಾಗುತ್ತದೆ. 8 ಘಂಟೆಗೆಲ್ಲ ತಮ್ಮ ವಸ್ತ್ರಗಳಲ್ಲಿ ಪೂರ್ಣವಾಗಿ ಮಿಂದಿರುತ್ತಾರೆ. ಅತೀವ ಕಷ್ಟ ಪಡುವ ಈ ಜನ..ದಿನದ ಅಂತ್ಯಕ್ಕೆ ಮನೆಗೆ ಹೋಗಲು ಕೂಡ ಪರದಾಡಬೇಕಾಗುತ್ತದೆ. ತಮ್ಮ ವಸತಿಯಲ್ಲಾದರು ಸುಖವಿದಿಯೇ??? ಅದೂ ಇಲ್ಲ… ಬೆಳಗಿನ ಜಾವ ೩.೩೦ಕ್ಕೆಲ್ಲ ಎದ್ದು ಬೆಳಗಿನ ದಿನನಿತ್ಯದ ಕಾರ್ಯಗಳನ್ನ ಮುಗಿಸಿ ಕೆಲಸಕ್ಕೆ ಹೊರಡಲು ತಯಾರಾಗುತ್ತಾರೆ. ಕಾರಣ ಅಲ್ಲಿ ನಿರ್ಮಿಸಲಾದ ವಸತಿಯ ವ್ಯವಸ್ತೆ ಹಾಗಿರುತ್ತದೆ. ೩೦೦ ಜನರಿಗೆ 6 ಶೌಚಾಲಯ ಹಾಗು ೬ ಸ್ನಾನಗೃಹ. ಯಾವ ಲೆಕ್ಕದಲ್ಲಿ ನಿರ್ಮಿಸಿದ್ದರೂ ದೇವರಿಗೇ ಗೊತ್ತು.

ಹಮ್ ಇದು ಕಾರ್ಮಿಕರ ಗೋಳಾದರೆ ಆಫೀಸಿನಲ್ಲಿ ಕೆಲಸ ಮಾಡುವವರ ಕಥೆ ಬೇರೆ. ಕೂತಲ್ಲಿಯೀ ಬೆವರು . ಇದು ಒಂತರ sweat therapy ಇದ್ದಂತೆ. ಕೊಬ್ಬು ಕರಗಿಸಲು ಒಳ್ಳೆಯ ಸುಲಭ ಮಾರ್ಗ . ಹೊರ ಬಿದ್ದರೆ ೧೦ ನಿಮಿಷದಲ್ಲಿ ಸುಟ್ಟು ಕರಕಲಾಗಳು ೨ ಮಾತಿಲ್ಲ. Ac ಇದ್ದರೂ…ಈ ತಾಪಮಾನಕ್ಕೆ ಅವುಗಳು ಕೂಡ ತಮ್ಮ ಕಾರ್ಯವನ್ನ ಸ್ಥಗಿತಗೊಲ್ಲಿಸಿ ಬಿಡುತ್ತವೆ…!!! ಹಹ…ಒಂದು ಹುಚ್ಚು ಆಲೋಚನೆ ನನ್ನ ತಲೆಗೂ ಕೂಡ ಬಂತು. ಹೇಗಿದ್ದರೂ ಇಲ್ಲಿ ತನಕ ಬಂದಾಗಿದೆ . ಸ್ವಲ್ಪ ಪ್ರಯತ್ನ ಪಟ್ಟರೆ ಒಂದು ವಾರದಲ್ಲಿ ಸ್ವಲ್ಪ ಸ್ವಲ್ಪವಾಗಿ ಕಪ್ಪಾಗಿ…ಕಲ್ಲಿದ್ದಲಾಗಿ , ಕರಕಲಾಗಿ ಪಕ್ಕದ ದಕ್ಷಿಣ ಆಫ್ರಿಕಾಗೆ ಪಾಸ್ಪೋರ್ಟ್ ಇಲ್ಲದೆ ಒಳಗೆ entry ತಗೋ ಬಹುದು ಅಂತ.. J ಹೇಗಿದ್ದರೂ ಅಲ್ಲಿಯ income ಕೂಡ ಹೆಚ್ಚು … J ಅಲ್ಲೇ ಯಾವದಾದರು ಒಂದು ಕರಕಲು ಹುಡುಗಿಯನ್ನ set ಮಾಡಿಕೊಂಡರೆ… ಲೈಫ್ ಸಾರ್ಥಕ.. J ಆದರೆ ಲೈಫ್ ಪೂರ್ತಿ ಅಂಧಕಾರದ ಕಗ್ಗತ್ತಲಲ್ಲಿ ಕೈ ತೊಳೆಯಬೇಕಲ್ಲ ಎಂಬುದೇ ಒಂದು ಯಕ್ಷ ಪ್ರಶ್ನೆಯಾಗಿದೆ …. J ಏನಂತೀರ…???? J

15 comments:

madhu said...

hahhahahahahahahha

Madhu said...

Kari hudgine hudkana nenge

Vinay Hegde said...

@ Madhu...hahaha...ille idda taga :)

Unknown said...

Jeevana sir , Hottepadu yenu madoduuu jeevana Nedasabekuuu .

Vinay Hegde said...

Hmmm u are right Ganni :)

shaanta chitta said...

karragagi bandre siddi hudugi nodakagtu, husharu.

Vinay Hegde said...

hahaha... thanku papa... naane hudkatte :)

Mohsin Shaikh said...

Well written Vinay. I always read ur blogs and enjoy them. Not that I am very good at Kannada literature, but I really love to read ur blogs which are interesting, humorous also simple to understand.

Keep writing!

ಮನಸಿನ ಮಾತುಗಳು said...

he he he....enappa hingella!!!...

shravana said...

ಓ.. ಕನ್ನಡ ತುಂಬಾ ಸುಧಾರಿಸಿದೆ.. :)
ನಂಗಂತು ಬಿಸಿಲೆಂದರೆ ಆಗಲ್ಲ..! ಅದ್ಹೇಗೆ ಸಹಿಸ್ತಾರೊ ಜನ ಅಲ್ಲಿ.. ನಾ ಕಾಣೆ..!
Keep writing..

ಸಾಗರಿ.. said...

ಪಾಪ ಅವರ ಮಾತು ನಿಜ ವಿನಯ್ ಅವರೆ, ಸಿದ್ದೀರ ಹುಡ್ಗಿ ಮದ್ವೆ ಆಗಿ ನುಣ್ಣನೆಯ ಕೂದಲ ಹೆಂಡತಿ ಎಂದು ಎಂದಾದರೊಮ್ಮೆ ಬ್ಲಾಗಲ್ಲಿ ಬಣ್ಣಿಸುವ ಅವಕಾಶ ತಪ್ಪಿಹೋಕ್ತು ಜೋಕೆ!!

ಸಾಗರದಾಚೆಯ ಇಂಚರ said...

ಅದೇನ್ ಸರ್ ದಕ್ಷಿಣ ಆಫ್ರಿಕಾ ಭಾರೀ ಸೆಳಿತಾ ಇದೆ
ಐಡಿಯಾ ಏನೋ ಚೆನ್ನಾಗೆ ಇದೆ
ಶುಭಾಸ್ತ್ಯ ಶೀಘ್ರಂ

Vinay Hegde said...

Hahaha... ellarigu tumbaa dhanyavaadagalu :)

@ Divya- hahaha... time haagide..:)

@ Shravana - illi jana syankaalada tanaka horage baruvudilla... :)

@ Saagari - haha... nunnaneya koodala tantege hogalla... gunguru koodala bagge bannisuva avakaasha sigattalla... :) kuch paane ke liye kuch khona padta hai :)

@ Sagaradaache - haha neevno nanna dakshina aafricage kalso ella sketch maadidaagide :)

Bindumalini said...

need to experience differences ,that's what life is.nice:))

Vinay Hegde said...

Huummmm Thanks bindi for ya comment... but this diferentiation is crossing the upper limit..:) later its difficult to integrate back... :)