Welcome to My World of Words!!!

Pages

Wednesday, June 23, 2010

ಗುಂಡನ ಕನಸುಗಳು - ಸಿದ್ದಾಪುರ ಮಳ್ಳ



ಗುಂಡನ ಕನಸುಗಳು ..!!!!

ಭಾಗ - ಸಿದ್ದಾಪುರ ಮಳ್ಳ..:) !!!

ಪರಿವಿಡಿ

ಪ್ರಿಯ ಓದುಗರೆ ..!!! ನನ್ನ ಎಲ್ಲ ಆಂಗ್ಲ ಬ್ಲೋಗುಲಿಗೆ ಸ್ಪಂದಿಸಿ ಬೆಳಸಿದ ನಿಮ್ಮೆಲರಿಗೂ ವಂದನೆಗಳು . ಈಗಾಗಲೇ ಕನ್ನಡದಲ್ಲಿ ಒಂದು ಬ್ಲಾಗ್ ಬರೆದಿರುವ ನನಗೆ ಮತ್ತೆ ಯಾಕೋ ಕನ್ನದಲ್ಲಿ ಬರೆಯುವ ಒಲುಮೆ ಹೆಚ್ಚಾಗಿದೆ . ಆದರೆ ನನ್ನ ಕನ್ನಡ ಸ್ವಲ್ಪ ವೀಕು. ಮನೆಯಲ್ಲಿ ಕನ್ನಡ ದಿನಪತ್ರಿಕೆ , ಪುಸ್ತಕಗಳನ್ನ ಓದು ಓದು ಎಂದು ಅಮ್ಮ ಅಪ್ಪ ಹಗಲು ಇರುಳು ತಪಸ್ಸು ಮಾಡಿದಸ್ಟೇ ಶ್ರಮಿಸಿದರು…ಪಾಪ ಅವರ ಆಸೆ ನೆರವೇರಲೇ ಇಲ್ಲ. ಕಾಲೇಜಿನಲ್ಲೂ ಕೂಡ ಕನ್ನಡದಲ್ಲಿ ಒಂದು ಪ್ರೇಮ ಪತ್ರವನ್ನು ಸಹ ಬರೆದವನಲ್ಲ. ಇಲ್ಲಿ..ಇವತ್ತು.. ಇಷ್ಟು ದೊಡ್ಡ ಬ್ಲಾಗಿನ ಪ್ರತ್ನವನ್ನ ಮಾಡುತಿದ್ದೇನೆ..ದಯವಿಟ್ಟು ತಪ್ಪುಗಲೇನೆ ಇದ್ದರು ಉಧರಕ್ಕೆ ಪ್ರೋಕ್ಷಣೆ ಮಾಡಿಕೊಂಡು ಸಹಕರಿಸಿ…J ಧನ್ಯವಾದಗಳು ..!!!

ಬೇಸಿಗೆಯ ಧಗೆ ಶುರುವಾಗಿತ್ತು..!!! ಶಾಲೆಗೆ ರಜೆ ಬಂದು ೪ ದಿನಗಳು ಸಂದಿದ್ದವು ..!!! ಗುಂಡನ ಕಾಲುಗಳು ಮನೆಯಲ್ಲಿ ನಿಲ್ಲುತಲೇ ಇರಲಿಲ್ಲ …J ಮೊದಲನೆಯ ತರಗತಿಯ ವಿದ್ಯಾಭ್ಯಾಸ ಮುಗಿಸಿದೆ ಅನ್ನೋ ಖುಶಿ ಒಂದೆಡೆ ಆದರೆ …ಇನ್ನು ೨ ತಿಂಗಳ ಶಾಲೆಯ ಕಡೆ ಮುಖ ಹಾಕುವುದಿಲ್ಲ ಅನ್ನೋ ಸಂತಸ ಇನ್ನೊಂದೆಡೆ..!!! ಬೆಳಿಗ್ಗೆ ೮.೩೦ಕ್ಕೆಲ್ಲ ತಿಂಡಿ ಮುಗಿಸಿ ಜೇಬಲ್ಲಿ ಗೊಲಿಗಲ್ಲನ ಇಳಿಸಿ ಹೊರಟರೆ… ಮಧ್ಯಾನ ಊಟಕ್ಕೆ ದರ್ಶನ… ಅಸ್ಟು ಬ್ಯುಸಿ ಸಾಹ್ಯಬ್ರು ..!!! ಈ ಮದ್ಯೆ ಗಾಳಿಪಟ ಹಾರಿಸುವುದು, ಕ್ರಿಕೆಟ್ ಆಡುವುದು ... ಎಲ್ಲ ದಿನಚರಿಯಲ್ಲಿ ಪತ್ತಿಯಾಗುತಿತ್ತು..!!! ಶಾಲೆಗೆ ಹೋಗುವಾಗ ಬೆಳ್ಳಗೆ ಹೊಳೆಯುತಿದ್ದ ಗುಂಡ ದಿನಾ ಬಿಸಿಲಲ್ಲಿ ಕುಣಿದು ಕುಪ್ಪಳಿಸಿ ಕಪ್ಪು ಇದ್ದಲಾಗಿದ್ದ. ಮಧ್ಯಾನ ಊಟ ಮುಗಿಸಿ ಚಡ್ಡಿ ಏರಿಸಿದನೆಂದರೆ … ಅದೆಲ್ಲೆಲ್ಲಿ ತುಕ್ಕುತಿದ್ನೂ ಅವನಿಗೇ ಬಹುಷಃ ಗೊತ್ತಿರುತ್ತಿತ್ತೋ ಇಲ್ವೋ…J ಅಲ್ಲ್ಯಾರ್ದೋ ಮನೆ ಗಾಜು ವಡೆದ..ಇಲ್ಲಿ ಇನ್ನೊಂದು ಮನೆಯ ಹಂಚಿನಮೇಲೆ ಕಲ್ಲು ಹೊಡೆದ …ಇನ್ನ್ಯಾರಿಗೋ ಕಲ್ಲು ಹೊಡೆದ…ಅಂತೆಲ್ಲ ಅಕ್ಕಪಕ್ಕದವರಿಂದ ದೂರುಗಳು ಸರವೇ ಸಾಮನ್ಯವಾಗಿಬಿಟ್ಟಿತು. ಹೊಡೆದು ಬಡೆದು ಬುಧ್ಧಿ ಹೇಳಿ ಅಪ್ಪ ಅಮ್ಮ ಸುಸ್ತಾಗಿದ್ದರು. ಹೊಡೆದ ಕೂಡಲೇ ಸುಂಡಿ ಉದ್ದ ಮಾಡಿಕೊಂಡು ಯಾವುದಾದರೊಂದು ಮೂಲೆ ಹಿಡಿದು ಮೌನ ಧರಿಸಿ ಕೂತು ಬಿಡುತಿದ್ದ ..!!! ಕೊನೆಗೆ ಸಮಾಧ ಮಾಡಲು ಅವನ ಅಪ್ಪ ಚಾಕಲೇಟ್ ತಂದು ಬಾಯಿಗೆ ಹಿಡಿದಾಗಲೇ ಮೌನ ವೃಥಕ್ಕೆ ತಿಲಾಂಜಲಿ ಬಿಡುತ್ತಿದ್ದ. ಅಂಥಾ ಹಠಮಾರಿ ಈ ನಮ್ಮ ಗುಂಡ…J

ಅಪ್ಪ ಅಮ್ಮ ಈ ಪೋರನ ತುಂಟಾಟಕ್ಕೆ ಕಡಿವಾಣ ಹಾಕಲು ಒಂದು ಉಪಾಯ ಹುಡುಕಿದರು. ಅದೆನ್ನೆಂದರೆ ಇವನನ್ನು ಬೇಸಿಗೆ ರಜೆಗೆ ಊರಿಗೆ ಅಂದರೆ ಸಾಗರಕ್ಕೆ ಕಳಿಸುವುದು. ಫಲಿತಾಂಶ ಹೊರ ಬೀಳಲು ಇನ್ನೆರಡು ದಿನಗಳಿತ್ತು. ಗುಂಡ ೩ ಗಾಲಿ ಸೈಕಲ್ನಲ್ಲಿ ಬಸ್ ಒಂದನ್ನು ಹಿಂದಾಕುವ ಸಾಹಸದಲ್ಲಿ ನಿರತನಾಗಿದ್ದ.. ಅಮ್ಮ ಅವನ ಹುಚ್ಚು ಸಾಹಸವನ್ನು ನೋಡಿ ತುಸು ನಕ್ಕಳು. ಗುಂಡಾ.. ಎಂದು ಬಾಯಿತುಂಬ ಕರೆದಳು. ನಿಮಿಷಾರ್ಧದಲ್ಲಿ ಗುಂಡನ ಸವಾರಿ ಅಮ್ಮನ ಕಾಲೆದುರಿಗೆ ಬಂದೆರುಗಿತು .ಅಜ್ಜನ ಮನೆಗೆ ಹೋಗುವ ವಿಷಯವನ್ನ ಗುಂಡನಿಗೆ ತಿಳಿಸಿದಳು. ಗುಂಡನ ಮುಖ ಸೂರ್ಯಕಾಂತಿ ಹೂವಿನಂತೆ ಅರಳಿ ಹೋಗಿತ್ತು. ಜಗತ್ತಿನ ಎಲ್ಲಾ ಸಂತೋಷಗಳು ಇವನ ಕಾಲು ಬುಡಕ್ಕೆ ಬಂದು ಮುಗ್ಗರಿಸಿದಂತೆ ಕಾಣುತಿತ್ತು. ಅವನ ಮುಖದಲ್ಲಿನ ಕಳೆ ದುಗುಣವಾಯಿತು…J ಅವನ ಸಂತೋಷಕ್ಕೆ ಪಾರವೇ ಇರದಂತಾಯಿತು .

ಕೊನೆಗೂ ಆ ಸುದಿನ ಬಂದೇ ಬಿಟ್ಟಿತು. ಊರಿಗೆ ಕರೆದೊಯ್ಯಲ್ಲು ಅಜ್ಜ ಮನೆಗೆ ಬಂದಿದ್ದನು. ಗುಂಡ ಹೊಸ ಚಡ್ಡಿಯನ್ನ ಏರಿಸಿ ಶರ್ಟನ್ನ ಅದರೊಳಗೆ ಸಿಕ್ಕಿಸಿ ಅಮ್ಮನ ಹತ್ತಿರ ಹೋದ …ಶರ್ಟನ್ನು ಚಡ್ಡಿಯ ವಳಗೆ ಸರಿಯಾಗಿ ಸಿಕ್ಕಿಸಲು ಕಳುಸಿದಳು. ಕೊನೆಗೆ ಬಾಚಣಿಗೆ ಹಿಡಿದು ಅಪ್ಪನ ಹತ್ತಿರ ಹೋದ. ಅಪ್ಪ ತಲೆ ಸರಿ ಮಾಡಿ ಕಳಿಸಿದನು. ಅಪ್ಪ ಅಮ್ಮನಿಗೆ ಟಾಟಾ ಎಂದು ಬಸ್ಸು ಹತ್ತೇ ಬಿಟ್ಟ. ಬುಸಿನಲ್ಲಿ ಮೊದಲನೆಯ ಸೀಟಿನಲ್ಲಿ ಕೂತನು. ಡ್ರೈವರ್ ಬಸ್ ಓಡಿಸುವುದನ್ನು ತುಂಬಾ ಮನಸ್ಸು ಕೊಟ್ಟು ಆಲಿಸಿದನು. ಇಷ್ಟು ಮನಸ್ಸು ಕೊಟ್ಟು ಓದಿದಿದ್ದರೆ ಬಹುಷಃ ಕ್ಲಾಸಿಗೆ ಫಸ್ಟ್ ಬರೋದ್ರಲ್ಲಿ ಎರಡು ಮಾತಿರಲಿಲ್ಲ ..ಹೋಗ್ಲಿ ಬಿಡಿ .. ಆ ವಿಷಯ ಯಾಕೆ ಈಗ J ಆ ದ್ರಿವೆರ್ಣ ಗೇರ್ ಬದಲಿಸುವ ಪರಿ, ತಿರುವಿನಲ್ಲಿ ಮೈ ಬಳುಕಿಸಿ ಸ್ಟೀರಿಂಗ್ ತಿರುಗಿಸುವ ಟೀವಿ ಟೇನ್ಕಾರಗಳನ್ನೆಲ್ಲ ಕಣ್ಣಿನಲ್ಲಿ ತುಂಬಿಕೊಂಡ.. ಆನಂದಿಸಿದ.. ಬಸ್ಸು ಎಲ್ಲೆಲ್ಲಿ ಹೊರ್ನ್ ಉಪಯೋಗಿಸುತ್ತಾರೆ, ರೆವೆರ್ಸ್ ಎಲ್ಲಿ ಮಾಡುತ್ತಾರೆ… ಎಲ್ಲವನ್ನು ಸೂಕ್ಶ್ಮವಾಗಿ ತದೇಕಚಿತ್ತವಾಗಿ ಗ್ರಹಿಸಿದ…ಬಸ್ಸಿನ ಶಬ್ದ…ಅದು ಏರಿನಲ್ಲಿ, ತಗ್ಗಿನಲ್ಲಿ, ಸಮತಟ್ಟು ಪ್ರದೇಶದಲ್ಲಿ ಹೇಗೆ ತನ್ನ ಲಯವನ್ನು ವಿಂಗಡಿಸುತ್ತದೆಯನದೆಲ್ಲ ಮನದಟ್ಟಿ ಸಿಕೊಂಡ. ಅಂತೂ ಇಂತೂ ಅಜ್ಜನ ಮನೆ ಬಂತು. ಗುಂಡ ಎಂದಿನಂತೆ ಶಾಲಯಿಂದ ಬಿಟ್ಟ ಕೂಡಲೆ ಓಡುವಂತೆ ಇಲ್ಲೂ ಬಸ್ಸಿಂದ ಇಳಿದ ಕೂಡಲೇ ಓಡತೊಡಗಿದ . ಸ್ವಲ್ಪ ದೂರ ಹೋಗಿ ದಾರಿಗಾಣದೆ ಅಜ್ಜನಿಗೆ ಕಾಡೆ ಮುಖ ಮಾಡಿದ.ಬಾಲ ಬಿಚ್ಚುವ ಮೊದಲೇ ಮುದುಡಿ ಹೋಯಿತು. ಅಜ್ಜನ ಜೊತೆ ತೆಪ್ಪಗೆ ಮನೆಗೆ ನಡೆದ.

ರಾತ್ರಿ ಊಟ ಮುಗಿಸಿ ಕೈತೊಳದವನೇ ಅಜ್ಜ ಅಜ್ಜಿಯ ಕೊನೆಗೆ ಜಾರಿದ. ನಿದ್ದೆಯಲ್ಲಿ ಕೈ ಬೀಸಿ ಕರೆಯುತಿತ್ತು. ಬೆಳಗಿಂದ ನೋಡಿದ ಆ ಡ್ರೈವರ್ ಪಕ್ಕದಲ್ಲಿ ಬಂದಿದ್ದ…ಅಂದ್ರೆ ಅವನ ಕನಸಿನಲ್ಲಿ…ಯಾವದೋ ಘಾಟಿನಲ್ಲಿ ಕಷ್ಟಸಾಧ್ಯ ದಾರಿಯಲ್ಲಿ ಸ್ಟೀರಿಂಗನ್ನ ರಭಸದಿಂದ ತಿರುಗಿಸುತಿದ್ದ. ಗುಂಡನ ಕೈಗಳು ಸುಮ್ಮನಿರಲಿಲ್ಲ. ಲಿಸೆನ್ಸೆ ಇಲ್ಲದಿದ್ರೆ ಏನಂತೆ..?? ಕನಸಿನಲ್ಲಿ ಗಾಡಿ ಓದಿಸಲು ಲಿಸೆನ್ಸೆ ಬೇಕೆ??? ಗುಂಡನು ಸಹ ರಭಸದಿಂದ ಕೈ ತಿರುಗಿಸಿಯೇ ಬಿಟ್ಟ . ಕೈ ಅಜ್ಜನ ಹೊಟ್ಟೆಗೆ ಅಗೋಚರ ಧೂಮಕೇತುವಿನಂತೆ ಅಪ್ಪಳಿಸಿತು… ಅಜ್ಜ ... ಅಯ್ಯಯ್ಯೋ ಅಂತ ಎದ್ದು ಕುಳಿತ… ಅಜ್ಜಿಯು ಗಾಬರಿಯಾಗಿ ಕುಮೇಟಿ ಬಿದ್ದಳು... ನೋಡಿದರೆ ಮೊಮ್ಮಗ ಬಸ್ಸು ಓಡಿಸುತ್ತಿದ್ದಾನೆ… ಅಯ್ಯೋ ಕತೆಯೇ ಎಂದು ಮೊಮ್ಮಗನನ್ನು ಮೂಲೆಗೆ ತಳ್ಳಿ ಎಷ್ಟು ಬೇಕಾದರೂ ಬಸ್ಸು ಓದಿಸಲೆಂದು ಬಿಟ್ಟು ಮಲಗಿದರು… ಬಸ್ಸು ಎಷ್ಟು ಓಡಿಸಿದರು ಪೆಟ್ರೋಲ್ ಮಾತ್ರ ಕಾಲಿಯೇ ಆಗಲಿಲ್ಲ….

ಹ್ಮಂ00 ಬೆಳಗಾಯಿತು... ಅಜ್ಜ ಪೀಟೆಗೆ ಹೋಗಲ್ಲೆಂದು ರೆಡಿ ಆಗುತ್ತಿದ್ದ .ಗುಂಡ ನಾನೂ ಬರ್ತೀನಿ ಅಂತ ಒಂದೇ ಸಮನೆ ರಾಗ ಎಳೆದ. ಅಜ್ಜ ಚಾಕಲೇಟ್ ತರ್ತೀನಿ ನಾಳೆ ಕರ್ಕೊಂಡು ಹೋಗ್ತೀನಿ ಅಂತ ಹೇಳಿ ಮೊಮ್ಮಗನ ಭಾಯಿ ಮುಚ್ಚಿಸಿದ. ಗುಂಡನಿಗೆ ಪೇಟೆ ಗಿಂತಲೂ ಹೆಚ್ಚಾಗಿ ಆ ಬಸ್ ಡ್ರೈವರ್ ನೋಡಬೇಕಿತ್ತು. ಕೊನೆಗೂ ಬಿಡದೇ ಹಠ ಮಾಡಿ ಬಸ್ ಮೆಟ್ಟಲೇರಿದ. ಇದು ಹಳ್ಳಿಯ ಬಸ್ ಆಗಿದ್ದಕ್ಕಾಗಿ ರೋಡಿಗೆ ಟಾರಿನ ಸಾಂಗತ್ಯ ಇರಲಿಲ್ಲ. ಅರ್ಧ ಗಂಟೆ ಬಸ್ಸಿಗೆ ಕಾದ ನಂತರ ಬಸ್ಸು ಬೇಸಿಗೆಯ ಮಳೆಯಂತೆ ಟೀವಿ ಟೀನ್ಕಾರದಿಂದ ಬಂದು ಅರಳಿ ಮರದ ಕತ್ತೆಯ ಸುತ್ತು ಹಾಕಿ ಗುಂಡನ ಮುಂದೆ ಬಂದು ನಿಂತಿತು. ಆ ಬಸ್ಸನ್ನು ನೋಡಲು ಇದ್ದ ಎರಡು ಕಣ್ಣುಗಳು ಸಾಲದಾಗಿಹೂಗಿತ್ತು.. ಯಾಕೆಂದರೆ ಇರೋ ಎರಡು ಕಣ್ಣುಗಳು ಬಸ್ ಬಂದ ರಭಸಕ್ಕೆ ಮುಚ್ಚಿ ಹೋಗಿದ್ದವು .. J ಮೊದಲನೆಯ ಸ್ಟಾಪ್ ಆದ ಕಾರಣ ಮುಂದಿನ ಸೀಟ್ ಸಿಗುವದು ಅಂತ ಕಷ್ಟಸಾಧ್ಯ ವಿಚಾರವಾಗಿರಲಿಲ್ಲ. ಗುಂಡ ಓಡಿ ಹೋಗಿ ಡ್ರೈವರ್ ಪಕ್ಕದ ಸೀಟಲ್ಲಿ ಜಮಾಯಿಸಿ ಕುಳಿತ . ಚಾಲಕನ ಎಲ್ಲಾ ಹಾವ ಭಾವಗಳನೆಲ್ಲ ಮೈಗೂಡಿಸಿಕೊಂಡ.

ದಿನಗಳುರುಲಿದವು. ಗುಂಡನಿದೊಂದು ವಿಷಯ ಮನದತ್ತೈತು. ಜಗತ್ತಲ್ಲಿ ಡ್ರೈವರ್ ಒಬ್ಬನೇ ದುಡ್ಡಿಲ್ಲದೆ ಲೋಕ ಸುತ್ತುವನೆಂಬ ವಿಷಯ ತಲೆಯಲ್ಲಿ ಅಚ್ಚುಳಿಯಿತು. ಗುಂಡ ಅಜ್ಜನ ಮನೆಯ ಅಂಗಳದಲ್ಲೆಲ್ಲ ತನ್ನ ಕಾಲ್ಪನಿಕ ಬಸ್ಸನ್ನ ಚಲಿಸಲಾರಂಬಿಸಿದ. ಮುಂದೊಂದು ದಿನ ಬಸ್ ಚಲಕನಾಗುವೆ ಎಂದು ಹೆಮ್ಮೆ ಇಂದ ಹೇಳತೊಡಗಿದ. ಅಜ್ಜಿ ಊಟಕ್ಕೆ ಕರೆದರೂ ಬಸ್ಸು ಸ್ನಾನಕ್ಕೆ ಕರೆದರೂ ಬಸ್ಸಲ್ಲೇ ಬರುತಿದ್ದ .ಸ್ವಲ್ಪ ಪಕ್ಕದಲ್ಲಿ ಅದೇ ವಯಸ್ಸಿನ ಇನ್ನೊಬ್ಬ ಪೂರನೊಡನೆ ಇವನ ಗೆಳತನ ಬೆಳೆಯಿತು. ಅವನಿಗೂ ಬಸ್ಸಿನ ಗೀಳು ಹಿಡಿಸಿಬಿಟ್ಟ. ಅಜ್ಜ ಅಜ್ಜಿಗೆ ಇವನು ಬಸ್ ಬಿದೊದನ್ನ ನೋಡಿ ತಲೆ ಚಿಟ್ಟು ಹಿಡಿದಿತ್ತು. ಅಪ್ಪ ಅಮ್ಮನಿಗೆ ದೂರವಾಣಿ ಇಂದ ಗುಂಡನ ಸಾಹಸಗಳು ರವಾನೆಯಾಗುತಿತ್ತು. ಗುಂಡ ಆಜ್ಜನ ಹಿಂದೆ ತೋಟಕ್ಕೆ ಓಡುತ್ತಿದ್ದ. ಅಲ್ಲೂ ಬಸ್ಸನ್ನು ಬುರ್ರ್ ಎನ್ನಿಸುತ್ತಿದ್ದ. ಅಜ್ಜಿ ಹಾಲು ಕರೆಯಲು ಹೋದರೆ ಅಲ್ಲೂ ಬಿಡುತ್ತಿರಲಿಲ್ಲ . ಪೂಒಮ್...ಎಂದು ಹೊರ್ನ್ ಬೇರೆ ಹೊಡೆಯುತಿದ್ದ. ಗಾಬರಿಗೊಂಡ ಹಸುಗಳು ಅಜ್ಜಿಗೆ ಜಾಡಿಸಿ ಒಡೆಯುತ್ತಿತ್ತು . ಹಾಲು ಕೊಡುವುದನ್ನು ನಿಲ್ಲಿಸುತ್ತಿತ್ತು . ಅಜ್ಜಿ ಕೆಂಡಮಂಡಲ ಆಗುತ್ತಿದ್ದಳು.ಗುಂಡನ ಪುಂಡಾಟ ಮುಲಿಗು ಮುತ್ತಿಟ್ಟು.

೨ ತಿಂಗಳು ಕರಗಿತು. ಅಜ್ಜ ಗುಂಡನನ್ನು ಮನೆಗೆ ಕರೆತಂದನು. ಗುಂಡನ ತುಂಟಾಟ ಇಲ್ಲದೆ ಶಾಂತವಾಗಿದ್ದ ಮನೆಯ ಅಂಗಳ ಮತ್ತೆ ಸುನಾಮಿ ಎದ್ದಿತು. ಗುಂಡನ ಕಾಟ ಇಲ್ಲದೆ ಅಪ್ಪ ಅಮ್ಮ ನೆಮ್ಮದಿಇಂದ ಇದ್ದರು…ಆದರೂ ಎಲ್ಲೋ ಒಂದು ಕಡೆ ಮಗನ ಸದ್ದಿಲ್ಲದೇ ಸಣ್ಣ ಬೇಜಾರಿತ್ತು. ಆದರೆ ಮನೆಗೆ ಬಂದ ಕೂಡಲೆ ಗುಂಡ ಮತ್ತೆ ಬಾಲ ಬಿಚ್ಚಿದ. ಬಸ್ಸು ಬಿದಲಾರಮ್ಬಿಸಿದ . ಇದನ್ನ ನೋಡಿ ಅಪ್ಪನಿಗೆ ಸಿದ್ದಾಪುರದಲ್ಲಿ ಬಸ್ ನಿಲ್ದಾಣದಲ್ಲಿ ಇದ್ದ ಒಬ್ಬ ಮಳ್ಳನ ನೆನಪಾಯಿತು… J ಗುಂಡನ ಬಸ್ಬಿಡುವ ಪರಿ ನೋಡಿ ಅವನಿಗೂ ಸಿದ್ದಾಪುರ ಮಳ್ಳ ಎಂದು ನಾಮಕರಣ ಮಾಡೇ ಬಿಟ್ಟ…J ಗುಂಡನಿಗೆ ತನಗೇನೋ ಹೊಗಳುತ್ತಿದ್ದರೆಂದು .. ಕಿರೀಟ ಸಿಕ್ತೇನೋ ಅನ್ನೋರ್ ತಾರಾ ಮದ ಏರಿದ ಮಂಗನಂತೆ ಮತ್ತೂ ಎರಡು ಗೆಯರ್ ಜಾಸ್ತಿ ಹಾಕಿ ಇನ್ನು ಜೋರಾಗಿ ಬುಡಂಬುಡಂವ್ರೋಓಒಮ್ಮ್ಮ್ಮ್ಮ್ಮ್ಮ್ ಎಂದು ತನ್ನ ಎಂದು ಪೆಟ್ರೋಲ್ ಕೇಳದ ಬಸ್ಸನ್ನ ಓದಿಸಿದ …J ಗುಂಡನ ee ಹೊಸ ಅವತಾರ ನೋಡಿ ಅಪ್ಪ ಅಮ್ಮ ಮುಗುಳ್ನಕ್ಕರು ಜ ಮೂಗಿನ ಮೇಲೆ ಬೆರಳಿಟ್ಟು ಕಣ್ಣು ಪಿಟಕಾಯಿಸಿದರು..!!!!