Welcome to My World of Words!!!

Pages

Friday, May 6, 2011

ಕೆಫೆ ನಾಗಶ್ರೀ (ಸಷ್ಯಹಾರಿ)



ಕೆಫೆ ನಾಗಶ್ರೀ (ಸಷ್ಯಹಾರಿ)






ಅದೊಂದು ಸುಂದರ ಮುಂಜಾನೆ… ಸೂರ್ಯನ ಕಿರಣಗಳು ಭೂಮಿಯನ್ನ ಚುಮ್ಬಿಸುನ ಮುನ್ನ ನಮ್ಮ ಮಜೆಸ್ಟಿಕ್ ನಿಂದ ಬಂದ ಬಸ್ಸುಗಳು, ಆ ಕಡೆ ಈ ಕಡೆಇಂದ ಬಂದ ಕಾರು ಬೈಕುಗಳು ತಮ್ಮ ಚಿತ್ರ ವಿಚಿತ್ರ ಧ್ವನಿ ಕಹಳೆಗಳಿಂದ ನಮ್ಮಅಂತ ಬಡ ಬ್ರಾಹ್ಮಣ ಬಾಲಕರ ನಿದ್ದೆಗೆದಸುತ್ತಿದ್ದವು ..... ಆಹಾ .ಸುಂದರ ಕನ್ಯೆಯರಿಂದ ಹಾಳಾಗಬೇಕಿದ್ದ ನಿದ್ದೆ..... ಹಾಳಾದ ಈ ಬೆಂಗಳೂರಿನ ವಾಹನಗಳ ಕರ್ಕಶ ಶಭ್ದಕ್ಕೆ ಅಲಾರಂ ಇಲ್ದೆ ಏಳುವ ಪರಿಸ್ತಿತಿ ನಮ್ಮದಾಗಿದೆ …

ಹಾಗು ಹೀಗೂ ಹೊರಳಿ ಕೊನೆಗೂ ಎದ್ದೆ …. ಸ್ನಾನ ಮುಂತಾದವುಗಳನ್ನ ಮಾಡಲು ಯಾವ ತರಹದ ಉತ್ಸಾಹವು ಇರಲಿಲ್ಲ … ಅದರೂ ಕಚೇರಿಯಲ್ಲಿ ಸಹ ವರ್ತಿಗಳಿಗೆ ತೊಂದರೆ ಆಗಬಾರದೆಂಬ ಒಂದೇ ಉದ್ದೇಶಕ್ಕೆ ಎಲ್ಲಾ ಬೆಳಗಿನ ದಿನಚರಿ ಕೆಲಸಗಳನ್ನ ಮುಗಿಸಿ ಹೊರಟೆ.

ಪಕ್ಕದಲ್ಲೇ ಇದ್ದ ಒಂದು ಉಪಹಾರ ಗೃಹಕ್ಕೆ ದುಮುಕಿದೆ…ಅಲ್ಲಿ ಇದ್ದ ಭಕ್ಷಕಗಳ ಪಟ್ಟಿಯಲ್ಲಿ ತಿಂಡಿಗಳನ್ನ ನೋಡಿದೆ … ಮನೇಲಿ ಹೇಳಿದ ಒಂದು ವಾಕ್ಯ ಕಿವಿಯ ತೂತನ್ನು ಕೊರೆಯುತ್ತಿತ್ತು .. “ಎಣ್ಣೆ ಪದಾರ್ಥಗಳನ್ನ ತಿನ್ನಬೇಡ…ಇನ್ನು ದಪ್ಪ ಆಗ್ತಿಯ ಅಂತ …” ಅಲ್ಲಿ ಇಡ್ಲಿ ಒಂದು ಬಿಟ್ಟರೆ ಬೇರೆ ಯಾವ ತಿಂಡಿಯೂ ಎನ್ನೆರಹಿತವಾಗಿರಲಿಲ್ಲ .. ಸರಿ ಅಂತ ಇಡ್ಲಿ ಹೇಳಿದೆ …ಹಮ್ ಆ ದಿನ ಕಳೆಯಿತು …ಮಾರನೆ ದಿನ… ಅದೇ ಹಾಡು ಕಿವಿಯಲ್ಲಿ ಅದೇ ತಿಂಡಿ ಉಪಹಾರ ಗೃಹದಲ್ಲಿ…
ದಿನಗಳು ಕಳೆದವು ..ನನ್ನ ಇಡ್ಲಿ ತಿನ್ನುವ ತವಕ ಹೆಚಾಗುತ್ತಲೇ ಹೋಯಿತು …ದಿನದಿಂದ ದಿನಕ್ಕೆ ನನ್ನ ಇಡ್ಲಿ ಸಂಬಂಧ ಘಾದವಾಗಿ ಹೋಯ್ತು … ಇಡ್ಲಿ ತಿನ್ನುವುದರಲ್ಲಿ ನಿಪುನನಾಗುತ್ತ ಹೋದೆ…ಕಡಿಮೆ ಸಮಯದಲ್ಲಿ ಇಡ್ಲಿ ಯಾ ಪೂರ್ಣ ಸ್ವಾದವನ್ನ ಅನುಭವಿಸುವ ಹೊಸ ವಿಧಾನವನ್ನ ಕಂಡುಹಿಡಿದಿದ್ದೆ… 

ನನಗಿಂತ ಆ ಉಪಾಹಾರ ಗೃಹದ ಮಾಲೀಕ ಮತ್ತು ಅಲ್ಲಿಯ ಕೆಲಸದವರು … ನನ್ನ ಇಡ್ಲಿಯ ಹುಚ್ಚನ್ನ ನೋಡಿ …ಆ ಮಾಲಿಕನು ನಾ ಬಂದ ಕೂಡಲೇ ಚೀಟಿ ಹರಿದು ತಯಾರಿದುತಿದ್ದ… ಅಲ್ಲಿಯ ಕೆಲಸದವರು ಇನ್ನು ಒಂದು ಹೆಜ್ಜೆ ಮುಂದೆ ಇರುತ್ತಿದ್ದರು ….ಮಾಲೀಕ ಚೀಟಿ ಹರಿಯುವುದರಕ್ಕಿಂತ ಮುಂಚೆ ಅವರು ಇಡ್ಲಿ ತಟ್ಟೆಗೆ ಹಾಕಿ ಸಾಂಬಾರ್ ಹಾಕಿ ಚಟ್ನೆ ಹಾಕಿ ತಯಾರಿದುತಿದ್ದರು…  So sweet ಅಲ್ವಾ …ಹಹಹ …  ಹೀಗಿದೆ ನನ್ನ ಇಡ್ಲಿ ಪುರಾಣ ... ಇದು ಕಳೆದ ೩ ತಿಂಗಳಿಂದ ನಡೆಯುತ್ತಲೇ ಬಂದಿದೆ..  ಮುಂದೆ ಇನ್ನೆಸ್ತು ದಿನ ನಡೆಯುತ್ತೋ ನೋಡುವ... :)